06 Oct 2025

ಅಂತರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆ 2025-26 ದಿನಾಂಕ: 15-09-2025

ಇಲಕಲ್ಲ : ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತç, ಇತಿಹಾಸ, ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಅಡಿಯಲ್ಲಿ ಅಂತರಾಷ್ಟಿçÃಯ ಪ್ರಜಾಪ್ರಭುತ್ವದ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ಎಸ್. ಪಾಟೀಲ, ಅತಿಥಿಗಳಾಗಿ ಶ್ರೀ ಎಂ. ಎನ್. ಗೌಡರ, ಶ್ರೀ ಪಿ. ಆರ್. ಪಾಟೀಲ, ಶ್ರೀ ಎಸ್. ಓ. ಕಟ್ಟಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಶ್ರೀ ಎಸ್. ಎಸ್. ಪಾಟೀಲ ಆಧುನಿಕ ಜಗತ್ತಿನಲ್ಲಿ ಎಲ್ಲ ರಾಷ್ಟçಗಳು ಪ್ರಜಾ ಪ್ರಭುತ್ವ ಮಾದರಿಯ ಸರ್ಕಾರದಲ್ಲಿ ವಿಶ್ವಾಸವಿಟ್ಟಿರುತ್ತವೆ. ಅದನ್ನು ನಾವು-ನೀವು ಕೂಡಿ ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಪ್ರಜಾಪ್ರಭುತ್ವ ಹೊಂದಿರುವ ಸರ್ಕಾರವು ಜವಾಬ್ದಾರಿಯುತ ಸರ್ಕಾರವಾಗಿದೆ. ಪ್ರಜೆಗಳಿಗೆ ಆಡಳಿತದಲ್ಲಿ ಭಾಗವಹಿಸಲು ವಿಶೇಷ ಪ್ರಾತಿನಿದ್ಯವನ್ನು ನೀಡುತ್ತದೆ. ಆದರೆ ಪ್ರಜಾಪ್ರಭುತ್ವ ಸರಕಾರಕ್ಕೆ ಭಯೋತ್ಪಾದನೆ, ಕೋಮುವಾದ, ಪ್ರಾಂತೀಯವಾದಗಳು ಇರುವುದು ಮಾರಕವಾಗಿರುತ್ತವೆ. ಅದನ್ನು ನಿಯಂತ್ರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಎಂದರು.
ಕಾರ್ಯಕ್ರಮವನ್ನು ಕು. ಶರಣಮ್ಮ ನಿರೂಪಿಸಿದರು. ಕು. ರಕ್ಷಿತಾ ವಂದಿಸಿದರು.

Download