ಏಕತಾ ದಿನಾಚರಣೆ 31-10-2021
ರಾಷ್ಠೀಯ ಏಕತೆ ನಮ್ಮ ಉಸಿರಾಗಬೇಕು – ಶರಣಪ್ಪ ಅಕ್ಕಿ
ಇಲಕಲ್ಲ- ಸ್ಥಳಿಯ ವಿಜಯಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದಾಲದಲ್ಲಿ ರಾಷ್ಟçದ ಮೊದಲ ಗೃಹಮಂತ್ರಿ ಸರ್ದಾರ ವಲ್ಲಬಾಯಿ ಪಟೇಲರ 146ನೇ ಜನ್ಮ ದಿನಾಚರಣೆ ನಿಮಿತ್ಯ ಏಕತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜು ಚೇರಮನ್ನರಾದ ಶ್ರೀ ಶರಣಪ್ಪ ಅಕ್ಕಿಯವರು ವಿದ್ಯಾರ್ಥಿಗಳಿಗೆ ರಾಷ್ಟೀಯ ಐಕ್ಯತಾ ಪ್ರಮಾಣ ವಚನ ಭೋದನೆ ಮಾಡುತ್ತಾ ವಿದ್ಯಾರ್ಥಿಗಳು ಶ್ರದ್ಧಾಪೂರ್ವಕವಾಗಿ, ಅರ್ಪಣಾ ಮನೋಭಾವದಿಂದ ರಾಷ್ಟೃದ ಪ್ರಗತಿಗೆ, ಏಕತೆಗೆ ಶ್ರಮಿಸಬೇಕು. ಸಂವಿಧಾನ ಬಧ್ದವಾಗಿ ರಾಷ್ಟçದ ಏಕತೆ ನಮ್ಮ ಉಸಿರಾಗಬೇಕು. ವಿದ್ಯಾರ್ಥಿಗಳು ಸರ್ದಾರ ವಲ್ಲಬಾಯಿ ಪಟೇಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಚಾರ್ಯರಾದ ಪ್ರೋ, ಬಸವರಾಜ ಸುಗ್ಗಮದ ಮಾತನಾಡುತ್ತ 2014ರಿಂದ ರಾಷ್ಟೀಯ ಏಕತಾ ದಿನಾಚರಣೆ ಪ್ರತಿವರ್ಷ ಅಕೋಬರ್ 31 ರಂದು ಆಚಾಸಲಾಗುತ್ತಿದ್ದು. ಅದರ ನಿಮಿತ್ಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗುತ್ತದೆ. ವಲ್ಲಬಾಯಿ ಪಟೇಲರು ಸ್ವತಂತ್ರö್ಯ ನಂತರ ದೇಶದಲ್ಲಿ ಏಕತೆಗೆ ಮಹತ್ವ ಕೊಟ್ಟು ಭಾರವವನ್ನು ಒಂದು ಬಲಿಷ್ಢ ರಾಷ್ಟçವನ್ನಾಗಿಸಿದರು.
ಕಾರ್ಯಕ್ರಮದಲ್ಲಿ ಪ್ರೋ ಶ್ರೀಮತಿ ಎಸ್.ಎಸ್. ಉಪನಾಳ ಪ್ರೋ ಶ್ರೀ ಟಿ.ಎಮ್. ಕುಲಕರ್ಣೆ ಪ್ರೋ ಎಸ್.ಎಸ್. ಪಾಟೀಲ ಪ್ರೋ, ಎಮ್.ಎನ್. ಗೌಡರ ಭೋದಕೇತರ ಸಿಬ್ಬಂದಿ ವರ್ಗ ಹಾಜರಿದ್ದರು ಕು. ಪವಿತ್ರಾ ಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು.
Download