04 Nov 2025

ಕನ್ನಡ ರಾಜ್ಯೋತ್ಸವ ದಿನಾಚರಣೆ ೨೦೨೫-೨೬ ದಿನಾಂಕ: ೦೧-೧೧-೨೦೨೫

ಇಲಕಲ್ಲ : ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಅಡಿಯಲ್ಲಿ ದಿನಾಂಕ: ೦೧-೧೧-೨೦೨೫ ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಸ್. ವ್ಹಿ. ಎಂ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀ ರವಿ ವ್ಹಾಯ್ ವಾಲಿಕಾರ ಅವರು ಕನ್ನಡ ಭಾಷೆಯು ಅತ್ಯಂತ ಪ್ರಾಚೀನವಾದ ಭಾಷೆಯಾಗಿದ್ದು, ಅತ್ಯಂತ ವೈಜ್ಞಾನಿಕವಾಗಿ ರಚನೆಯಾಗಿದೆ. ಆದ್ದರಿಂದ ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ ಎಂದು ಹೇಳಿದರು ಮತ್ತು ಭಾಷಾವಾರು ಪ್ರಾಂತ್ಯ ರಚನಾ ಸಂದರ್ಭದಲ್ಲಿ ಕನ್ನಡ ಭಾಷಿಯಿಂದಲೇ ಉದಯವಾದ ನಮ್ಮ ರಾಜ್ಯ ಕರ್ನಾಟಕವು ಸುಧೀರ್ಘವಾದ ಹೋರಾಟ, ಚಳುವಳಿ ಮತ್ತು ಸಾಹಿತಿಗಳ ಪ್ರಯತ್ನದ ಇತಿಹಾಸವನ್ನು ಹೊಂದಿದ್ದು, ಅದೆಲ್ಲವನ್ನು ನಾವು ಒಂದು ದಿನವಷ್ಟೇ ಅಲ್ಲ ನಿರಂತರ ನೆನೆಯುತ್ತಿರಬೇಕು ಎಂದು ಹೇಳಿದರು.
ನಂತರ ಕನ್ನಡ ನಾಡು ಮತ್ತು ನುಡಿಯ ವೈಭವವನ್ನು ಸಾರುವ ಗೀತೆಗಳ ಗಾಯನ ಮತ್ತು ನೃತ್ಯ ಸ್ಪರ್ಧೆಗಳನ್ನು ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್ನರಾದ ಶ್ರೀ. ಬಿ. ಎಂ. ಕಬ್ಬಿಣದ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಮಯೋಜಕರಾದ ಶ್ರೀ. ಪಿ. ಆರ್. ಪಾಟೀಲ, ವಿದ್ಯಾರ್ಥಿ ಒಕ್ಕೂಟದ ಚೇರಮನ್ನರಾದ ಶ್ರೀಮತಿ ಎ. ಸಿ. ದಟ್ಟಿ, ಸ್ಕೌಟ್ ಮತ್ತು ಗೈಡ್ಸ ರೇಂಜರ್ ಘಟಕದ ಲೀಡರ್ ಆದ ಶ್ರೀಮತಿ ಎಸ್. ಆರ್. ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಶ್ರೀ. ಟಿ. ಎಂ. ಕುಲಕರ್ಣಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಸ್ವಾಗತಿಸಿದರು. ಕು. ಪವಿತ್ರಾ ಮಾದರ ಪ್ರಾರ್ಥಿಸಿದರು. ಶ್ರೀ ಎಂ. ಎನ್. ಗೌಡರ ವಂದಿಸಿದರು.

Download