07 Apr 2025

ಕವಿ, ಬರಹಗಾರ ಶ್ರೀ ಶಾಂತರಸ ಶತಮಾನೋತ್ಸವ ಆಚರಣೆ. ದಿನಾಂಕ: ೦೭-೦೪-೨೦೨೫

ಕವಿ, ಬರಹಗಾರ ಶ್ರೀ ಶಾಂತರಸ ಶತಮಾನೋತ್ಸವ ಆಚರಣೆ.
ದಿನಾಂಕ: ೦೭-೦೪-೨೦೨೫

ಇಲಕಲ್ಲ: ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕವಿ, ಬರಹಗಾರ ಶ್ರೀ ಶಾಂತರಸರ ಶತಮಾನೋತ್ಸವದ ಅಂಗವಾಗಿ ಸಂಸ ಥಿಯೇಟರ್, ಬೆಂಗಳೂರು ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಯಚೂರಿನ ಸಾಹಿತಿಗಳು ಹಾಗೂ ನಿವೃತ್ತ ಶಿಕ್ಷಕರಾದ ಡಾ. ಶರಣಪ್ಪ ಗೋನಾಳ ಇವರು ಮಾತನಾಡಿ ಶಾಂತರಸರು ಓರ್ವ ಶ್ರೇಷ್ಠ ಕವಿಗಳಾಗಿ ಸಂಘಟನಾಕಾರರಾಗಿ, ಸ್ವಾತಂತ್ರö್ಯ ಹೋರಾಟಗಾರರಾಗಿ ಯುವಕರನ್ನು ಪ್ರೇರೇಪಿಸುವ ಶಕ್ತಿಯಾಗಿದ್ದರು. ಹೈದರಾಬಾದ ಕರ್ನಾಟಕದಲ್ಲಿ ನಿಜಾಮನ ಆಡಳಿತದಲ್ಲಿ ಕವಿ ಶಾಂತರಸರು ಉರ್ದು ಭಾಷೆಯಲ್ಲಿ ೧೦ ನೇ ತರಗತಿಯವರೆಗೆ ಶಿಕ್ಷಣ ಪಡೆದರು. ತಮ್ಮ ಕವನಗಳ ಮೂಲಕ ದೇಶ ಪ್ರೇಮವನ್ನು ಬೆಳೆಸಿದರು. ಅಲ್ಲದೇ ನಶಿಸಿ ಹೋಗುತ್ತಿರುವ ಜಾನಪದ ಸಾಹಿತ್ಯವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಚೇರಮನ್ನರಾದ, ಶ್ರೀ. ಬಿ. ಎಂ. ಕಬ್ಬಿಣದ ವಹಿಸಿದ್ದರು. ಕಾರ್ಯಕ್ರಮದ ಕುರಿತು ಪ್ರಾಚಾರ್ಯರಾದ ಪ್ರೊ. ಬಿ. ಬಿ. ಸುಗ್ಗಮದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಂಗಕರ್ಮಿ ಶ್ರೀ. ಮಹಾಂತೇಶ ಗಜೇಂದ್ರಗಡ ಹಾಗೂ ಐ.ಕ್ಯೂ.ಎ.ಸಿ ಸಂಚಾಲಕÀರಾದ ಪ್ರೊ. ಪಿ. ಆರ್. ಪಾಟೀಲ ಉಪಸ್ಥಿತರಿದ್ದರು. ಪ್ರೊ. ಟಿ. ಎಂ. ಕುಲಕರ್ಣಿ ಸ್ವಾಗತ ಕೋರಿದರು. ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಎಸ್. ಎಸ್. ಪಾಟೀಲ ಇವರು ವಂದಿಸಿದರು. ಕು. ಸಹನಾ ಕೊಪ್ಪರದ ಪ್ರಾರ್ಥಿಸಿದರು. ಕು. ದೇವಿ ಬಡಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು.

Download