14 Oct 2025

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ 2025-26. ದಿನಾಂಕ: 07-10-2025

ಇಲಕಲ್ಲ : ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಅಡಿಯಲ್ಲಿ ದಿನಾಂಕ: 07-10-2025 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಸಿಬ್ಬಂದಿ ವರ್ಗದವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಗೌರವ ಸಲ್ಲಿಸುವುದರ ಮೂಲಕ ಅವರ ಜಯಂತಿಯನ್ನು ಆಚರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಮಾತನಾಡುತ್ತಾ, ಮಹರ್ಷಿ ವಾಲ್ಮೀಕಿ ಸಂಸ್ಕೃತದ ಮಹಾನ್ ಪ್ರತಿಪಾದಕರಾಗಿದ್ದರು ಮತ್ತು ಮಹಾಕಾವ್ಯವಾದ ರಾಮಾಯಣವನ್ನು ಬರೆದಿದ್ದಾರೆ. ಇವರನ್ನು ರಾಮನಿಗೆ ಸಮಕಾಲೀನರು ಎಂದು ಪರಿಗಣಿಸಲಾಗಿದೆ. ರಾಮನನ್ನು ಹದಿನಾಲ್ಕು ವರ್ಷಗಳ ವನವಾಸದ ಸಂದರ್ಭದಲ್ಲಿ ಭೆಟಿಯಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ. ಎಂ. ಎನ್ ಗೌಡರ, ಪ್ರೊ. ಎಸ್. ಎನ್. ಓದಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ. ಜಿ. ಜಿ. ಕವಡಿಮಟ್ಟಿ, ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Download