ಮಹಾತ್ಮ ಗಾಂಧೀ ಜಯಂತಿ ಆಚರಣೆ 2025-26 ದಿನಾಂಕ: 02-10-2025


ಮಹಾತ್ಮ ಗಾಂಧೀ ಜಯಂತಿ ಆಚರಣೆ 2025-26
ದಿನಾಂಕ: 02-10-2025
ಇಲಕಲ್ಲ : ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಅಡಿಯಲ್ಲಿ ದಿನಾಂಕ: 02-10-2025 ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಮಾತನಾಡುತ್ತಾ, ಗಾಂಧೀಜಿಯವರು ಅಹಿಂಸೆ ಮತ್ತು ನಾಗರಿಕ ಅಸಹಕಾರದ ಬಗ್ಗೆ ಅಚಲವಾದ ಬದ್ಧತೆಯ ಮೂಲಕ ನಮ್ಮ ದೇಶವನ್ನು ಸ್ವಾತಂತ್ರö್ದತ್ತ ಕೊಂಡೊಯ್ದರು. ಅವರ ಜೀವನ ಸರಳತೆಯ ದಾರಿದೀಪವಾದದ್ದು. ಶಾಂತಿಯುತ ಮಾರ್ಗಗಳ ಮೂಲಕ ಮಹತ್ತರವಾದ ಬದಲಾವಣೆಯನ್ನು ಸಾಧಿಸಬಹುದು ಎಂದು ಅವರು ಸಾಬೀತುಪಡಿಸಿದ್ದರು. ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ. ಎಂ. ಎನ್ ಗೌಡರ, ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಪಿ. ಆರ್. ಪಾಟೀಲ, ವಿದ್ಯಾರ್ಥಿ ಒಕ್ಕೂಟದ ಚೇರಮನ್ನರಾದ ಪ್ರೊ. ಶ್ರೀಮತಿ ಎ. ಸಿ. ದಟ್ಟಿ, ಪ್ರೊ. ಜಿ. ಜಿ. ಪಾಟೀಲ, ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೊ. ಟಿ. ಎಂ. ಕುಲಕರ್ಣಿ ನಿರೂಪಿಸಿದರು. ಪ್ರೊ. ಎಸ್. ಟಿ. ಕಟ್ಟಿ ವಂದಿಸಿದರು.
