11 Sep 2025

ಶಿಕ್ಷಕರ ದಿನಾಚರಣೆ: ಅಕ್ಷರ ಕಲಿಸಿದ ಗುರುವಿಗೆ ನಮನ: ದಿನಾಂಕ: ೦೪-೦೯-೨೦೨೫

ಶಿಕ್ಷಕರ ದಿನಾಚರಣೆ: ಅಕ್ಷರ ಕಲಿಸಿದ ಗುರುವಿಗೆ ನಮನ
ದಿನಾಂಕ: ೦೪-೦೯-೨೦೨೫

ಇಲಕಲ್ಲ: ತಪ್ಪು ಮಾಡಿದಾಗ ಶಿಕ್ಷಿಸಿ, ತಿದ್ದಿ, ಬುದ್ಧಿ ಹೇಳಿದ ಗುರುಗಳನ್ನು ಗೌರವಿಸುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸ್ಥಳೀಯ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶಿಷ್ಠವಾಗಿ ಆಚರಿಸಲಾಯಿತು.
ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್.ಆರ್ ಕಂಠಿ ಸಭಾಭವನದಲ್ಲಿ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಯಿತು. ಸಭಾಂಗಣದಲ್ಲಿ ಹೂವುಗಳು, ಪುಷ್ಪಗುಚ್ಚಗಳು, ಬಲೂನಗಳು ಮತ್ತು ಬ್ಯಾನರ್‌ಗಳು ಇತ್ಯಾದಿಗಳಿಂದ ಅಲಂಕರಿಸಲಾಗಿತ್ತು. ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಮತ್ತು ಮುಖ್ಯ ಅತಿಥಿಗಳನ್ನು ಹೂವು ಹಾಗೂ ಉಡುಗೊರೆಗಳೊಂದಿಗೆ ಸ್ವಾಗತಿಸಲಾಯಿತು. ಮುಖ್ಯವಾಗಿ ಕಾರ್ಯಕ್ರಮವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು.
ತದನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯರಾದ ಪ್ರೊ. ಬಿ. ಬಿ. ಸುಗ್ಗಮದ ಅವರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರುಪಿಸುವ ಶಿಕ್ಷಕರ ಕೊಡುಗೆ ದೊಡ್ಡದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೇ ಇಡೀ ಸಮಾಜ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌÀರವಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ. ರಾಘವೇಂದ್ರ, ಉಪನ್ಯಾಸಕರು, ಶ್ರೀ ಗುರು ಚೈತನ್ಯ ಪಿ.ಯು ಕಾಲೇಜು, ಇಲಕಲ್ಲ ಇವರು ಮಾತನಾಡಿ, ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಬದುಕಿನಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ. ಅವರನ್ನು ಗೌರವಿಸುವುದು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಸಮಾಜದ ಕರ್ತವ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ. ಎಂ. ಎನ್ ಗೌಡರ ಅವರು ಸಾಂದರ್ಭಿಕವಾಗಿ ಮಾತನಾಡಿ, ಉಪನ್ಯಾಸಕರು ಸದಾಕಾಲವು ಹರಿಯುವ ನೀರಿನಂತೆ ಕ್ರಿಯಾಶೀಲವಾದದ್ದು. ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ರೂಪಿಸುವಲ್ಲಿ ಶ್ರಮಿಸಬೇಕು. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಚೇರಮನ್ನರಾದ ಶ್ರೀ ಬಿ.ಎಂ. ಕಬ್ಬಿಣದ ಅವರು ಮಾತನಾಡುತ್ತಾ “ದೇಶಕ್ಕೆ ಉತ್ತಮ ಪ್ರಜೆಯನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನೀವು ಗುರು ಮಾತ್ರವಲ್ಲ ಪ್ರತಿಯೊಬ್ಬ ವಿದ್ಯಾರ್ಥಿಗೂ ಮೊದಲ ಸ್ನೇಹಿತರಾಗಿದ್ದೀರಿ. ಆದ್ದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಕಾಯನಿರ್ವಹಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಎಲ್ಲಾ ಉಪನ್ಯಾಸಕರಿಗೆ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ & ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕು. ರೇಣುಕಾ ಪಲ್ಲೇದ, ಕು. ವಿಜಯಲಕ್ಷಿö್ಮ ಹಲ್ಯಾಳ ಹಾಗೂ ಕು. ಪ್ರತಿಭಾ ಮರೋಳ ಅನಿಸಿಕೆಗಳನ್ನು ಹಂಚಿಕೊAಡರು. ಕು. ಪಿ. ಪ್ರಿಯಾಂಕಾ ಪ್ರಾರ್ಥಿಸಿದರು. ಕು. ಸಬೀನಾ ಹೊಸಮನಿ ಸ್ವಾಗತ & ಪುಷ್ಪಾರ್ಪಣೆ ಕಾರ್ಯಕ್ರಮ ನಡೆಸಿದರು. ಕು. ಸಂಪದಾ ಮುಳಗುಂದ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕು. ಸಹನಾ ಗಚ್ಚಿನಮನಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿದರು. ಕು. ಸಂಗೀತಾ ಮತ್ತು ಕು. ರಕ್ಷಿತಾ ಬಿರಾದಾರ ನಿರೂಪಿಸಿದರು. ಕು. ಸುಮೇರಾ ವಂದಿಸಿದರು.

Download