‘ರಾಷ್ಟೀಯ ಏಕತಾ ದಿವಸ ಆಚರಣೆ’ 2025-26



ಇಳಕಲ್ಲ – ಸ್ಥಳಿಯ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ, ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸರ್ದಾರ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಎನ್.ಎಸ್.ಎಸ್. ಐ.ಕ್ಯೂ.ಎ.ಸಿ ಹಾಗೂ ಸ್ಕೌಟ್ಸ್ & ಗೈಡ್ಸ್ ಅಡಿಯಲ್ಲಿ ‘ರಾಷ್ಟೀಯ ಏಕತಾ ದಿನಾಚರಣೆ’ಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಶ್ರೀ ಬಿ. ಬಿ .ಸುಗ್ಗಮದ ಪ್ರಾಸ್ತಾವಿಕವಾಗಿ ಮಾತನಾಡಿ, ಹರಿದು ಹಂಚಿ ಹೋದ ಇಡೀ ದೇಶದ ಏಕತೆಗಾಗಿ ಪಟೇಲ್ ಶ್ರಮಿಸಿದ್ದರು. ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ಜೀವನ ಮೌಲ್ಯಗಳನ್ನು ತಿಳಿಯುವ ಅಗತ್ಯವಿದೆ. ನಮ್ಮ ದೇಶ, ನಮ್ಮ ದೇಶದ ಸಾಂಸ್ಕೃತಿಕ ಏಕತೆಗಾಗಿ ದುಡಿಯುವ ಅಗತ್ಯವಿದೆ. ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯ ಉಪನ್ಯಾಸಕರಾದ ಪ್ರೋ, ಡಿ. ಬಿ. ಮಾಗಿ ಮಾತನಾಡಿ, ಫ್ರೆಂಚ್ ಡಚ್, ಮತ್ತು ಬ್ರಿಟಿಷ್ ಆಡಳಿತಾವಧಿಯಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು-ಹಂಚಿಹೋದ ಭಾರತವನ್ನು ಒಗ್ಗೂಡಿಸುವ ಮೂಲಕ ದೇಶಕ್ಕೆ ಏಕತೆಯನ್ನು ತಂದು ಕೊಟ್ಟವರು ಸರ್ದಾರ್ ವಲ್ಲಭಬಾಯ್ ಪಟೇಲರು, ಅದಕ್ಕಾಗಿಯೇ ಅವರ ಜನ್ಮದಿನವನ್ನು ರಾಷ್ಟೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಒಕ್ಕೂಟ ಚೇರಮನ್ನರಾದ ಪ್ರೊ. ಶ್ರೀಮತಿ ಎ.ಸಿ. ದಟ್ಟಿ ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೋ, ಶ್ರೀ ಶಶಿಕಲಾ ಓದಾ ಉಪಸ್ಥಿತರಿದ್ದರು. ಸ್ಕೌಟ್ಸ್ & ಗೈಡ್ಸ್ ನ ರೆಂಜರ್ ಪ್ರೋ, ಶ್ರೀಮತಿ ಎಸ್. ಆರ್. ಕಲ್ಯಾಣಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಇದೇ ಸಂಧರ್ಭದಲ್ಲಿ ಪ್ರೋ, ಶ್ರೀ ಎಮ್.ಎನ್. ಗೌಡರ ರಾಷ್ಟೀಯ ಏಕತಾದಿನದ ಪ್ರತಿಜ್ಞಾವಿಧಿಯನ್ನು ಭೋದಿಸಿ, ವಂದಿಸಿದರು.
Download
