02 Sep 2025

ರಾಷ್ಟಿಯ ಕ್ರೀಡಾ ದಿನಾಚರಣೆ ಮತ್ತು ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನಾಚರಣೆ. ದಿನಾಂಕ: 29-08-2025

ರಾಷ್ಟಿಯ ಕ್ರೀಡಾ ದಿನಾಚರಣೆ ಮತ್ತು ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನಾಚರಣೆ.
ದಿನಾಂಕ: 29-08-2025

ಇಲಕಲ್ಲ : ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನವನ್ನು ರಾಷ್ಟಿಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಮೇಜರ್ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀಯುತ ವ್ಹಿ.ಎಸ್. ಅಂಗಡಿಯವರು ಮೇಜರ್ ಧ್ಯಾನ್‌ಚಂದ್ ಅವರು ಹಾಕಿಯನ್ನು ಸ್ವತಂತ್ರಪೂರ್ವದಲ್ಲಿ ಆಡುವುದರ ಮೂಲಕ ಭಾರತಕ್ಕೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟರು. ಅವರಿಗೆ ಹಾಕಿ ಆಟದ ಮೇಲೆ ಶ್ರದ್ಧೆ ಮತ್ತು ಭಕ್ತಿ ಇತ್ತು. ಇದರಿಂದಾಗಿ ಜಗತ್ತು ಅವರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿತ್ತು. ಹಾಕಿ ಆಟದ ಮಾಂತ್ರಿಕನಾದ ಮೇಜರ್ ಧ್ಯಾನ್‌ಚಂದ್ ಅವರ ಕ್ರೀಡಾ ಆಸಕ್ತಿಯನ್ನು ಗುರುತಿಸಿ, ಹಿಟ್ಲರ್‌ನು ಉನ್ನತ ಹುದ್ದೆ ನೀಡುವ ಮೂಲಕ ತಮ್ಮ ದೇಶದ ಪೌರತ್ವವನ್ನು ನೀಡಲು ಬಯಸಿದರು. ಆದರೆ ಧ್ಯಾನ್‌ಚಂದ್ ಅವರು ಅದನ್ನು ಸ್ವೀಕರಿಸದೇ ದೇಶಭಕ್ತಿಯನ್ನು ಮೆರೆಯುವ ಮೂಲಕ ಇತರ ಆಟಗಾರರಿಗೆ ಪ್ರೇರಣೆಯಾದರು ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ, ಕಾಲೇಜು ಚೇರಮನ್ನರಾದ ಶ್ರೀ ಬಿ. ಎಂ. ಕಬ್ಬಿಣದ ಅವರು ಮಾತನಾಡಿ, ನಾವೆಲ್ಲರೂ ಕ್ರೀಡೆಯನ್ನು ಪ್ರೀತಿಸಿ, ಅದರಲ್ಲಿ ಭಾಗವಹಿಸಬೇಕು ಮತ್ತು ಮೇಜರ್ ಧ್ಯಾನ್‌ಚಂದ್ ಅವರ ಕ್ರೀಡಾ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರಿ ಬಿ. ಬಿ. ಸುಗ್ಗಮದ ಅವರು ಕಾರ್ಯಕ್ರಮವನ್ನು ವಂದಿಸುವ ಮೂಲಕ ವಿದ್ಯಾರ್ಥಿ ಬದುಕಿನಲ್ಲಿ ಕ್ರೀಡೆ ಪ್ರಮುಖವಾದದ್ದು ಆದ್ದರಿಂದ ಕ್ರೀಡೆಯಲ್ಲಿ ಭಾಗವಹಿಸಿ ಸದೃಢವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ಪ್ರೊ. ಎಂ. ಎನ್. ಗೌಡರ, ಪ್ರೊ. ಎ. ಸಿ. ದಟ್ಟಿ, ದೈಹಿಕ ನಿರ್ದೇಶಕರಾದ ಶ್ರೀ. ಜಿ. ಜಿ. ಕವಡಿಮಟ್ಟಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಶಿವಗಂಗಮ್ಮ ಮುಷ್ಟಿಗೇರಿ, ಕು. ಸೂರಮ್ಮ ಮರಿಗೌಡರ ಉಪಸ್ಥಿತರಿದ್ದರು.
ಕು. ಪಿ. ಪ್ರಿಯಾಂಕಾ ಪ್ರಾರ್ಥಿಸಿದರು, ಪ್ರೊ. ಎಸ್. ಎಸ್. ಪಾಟೀಲ ಸ್ವಾಗತಿಸಿದರು ಹಾಗೂ ಪ್ರೊ. ಟಿ. ಎಂ. ಕುಲಕರ್ಣಿ ನಿರೂಪಿಸಿದರು.

Download