01 Mar 2025

Legal Awareness Program for Women 2024-25

ಮಹಿಳೆ ಸಮಾಜದ ಕಣ್ಣು- ಸುಮಂಗಲಾ ಹಿರೇಮಣಿ.
ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಿಳೆಯರಿಗೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಗಲಕೋಟ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ. ಸುಮಂಗಲಾ ಹಿರೇಮಣಿಯವರು ಮಾತನಾಡುತ್ತಾ ಮಹಿಳೆ ಇಂದು ಅಬಲೆ ಅಲ್ಲ, ಸಬಲೆ. ಮಹಿಳೆಯರ ರಕ್ಷಣೆಗಾಗಿ ಕೇಂದ್ರ & ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಾಂತ್ವನ ಕೇಂದ್ರ, ‘ಸಖಿ’ ಕೇಂದ್ರ ಮುಂತಾದ ಕೇಂದ್ರಗಳನ್ನು ಆರಂಭಿಸಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
‘ಸಖಿ’ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ. ಶಂಕ್ರಮ್ಮ ಜಂಬನಕಟ್ಟಿ ಅವರು ‘ಸಖಿ’ ಕಾರ್ಯಕ್ರಮದ ಯೋಜನೆಗಳನ್ನು ತಿಳಿಸಿದರು. ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಸಖಿ ಕೇಂದ್ರಕ್ಕೆ ಸಹಾಯಕ್ಕಾಗಿ ಸಂಪರ್ಕಿಸಬೇಕು ಎಂದು ತಿಳಿಸಿದರು.
ಮಹಿಳಾ ಸಾಂತ್ವನ ಕೇಂದ್ರದ ಕುಮಾರಿ. ಸವಿತಾ ಆಚಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಸಖಿ’ ಕೇಂದ್ರದ ಅಡ್ವೋಕೇಟ್ ಶ್ರೀಮತಿ ವಿಶಾಲಾಕ್ಷಿ ಅವರು ಮಹಿಳಾ ಕಾನೂನುಗಳ ಕುರಿತು ತಿಳಿಸಿದರು. ಕಾಲೇಜು ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸ ಸಂಚಾಲಕರಾದ ಶ್ರೀ. ಎಸ್. ಎಸ್. ಪಾಟೀಲ, ಎನ್.ಎಸ್.ಎಸ್ ಅಧಿಕಾರಿ ಶ್ರೀ. ಎಂ.ಎನ್. ಗೌಡರ, ಸ್ಕೌಟ್ & ಗೈಡ್ಸ್ ಅಧಿಕಾರಿ ಶ್ರೀಮತಿ. ಎಸ್.ಆರ್. ಕಲ್ಯಾಣಶೆಟ್ಟಿ, ಐ.ಕ್ಯೂ.ಎ.ಸಿ ಅಧಿಕಾರಿ ಶ್ರೀ. ಪಿ.ಆರ್.ಪಾಟೀಲ, ಒಕ್ಕೂಟ ಚೇರಮನ್ನರಾದ ಶ್ರೀ ಟಿ.ಎಂ. ಕುಲಕರ್ಣಿ ಉಪಸ್ಥಿತರಿದ್ದರು.
ಕುಮಾರಿ ಸಹನಾ ಕೊಪ್ಪರದ ಪ್ರಾರ್ಥಿಸಿದರು. ಕುಮಾರಿ ದೇವಿ ಬಡಿಗೇರ ನಿರೂಪಿಸಿದರು.

Download