25 Feb 2025

Matru Divas Program Celebration 2024-25

Loader Loading...
EAD Logo Taking too long?
Reload Reload document
| Open Open in new tab

ಮಹಾವಿದ್ಯಾಲಯದಲ್ಲಿ ‘ಮಾತೃದಿವಸ’ ಕಾರ್ಯಕ್ರಮ ಆಚರಣೆ.
೨೨-೦೨-೨೦೨೫

ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲಕಲ್ಲದಲ್ಲಿ ದಿನಾಂಕ: ೨೨-೦೨-೨೦೨೫ ರಂದು ಐ.ಕ್ಯೂ.ಎ.ಸಿ ಮತ್ತು ರಾಷ್ಟçಪಿತ ಮಹಾತ್ಮಾ ಗಾಂಧಿ ಫೌಂಡೇಶನ್ ಬೇನಾಳ ಆರ್. ಎಸ್, ವಿಜಯಪುರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟçಮಾತೆ’ೆ ಸ್ವಾತಂತ್ರö್ಯ ಸೇನಾನಿ ಕಸ್ತೂರಬಾ ಗಾಂಧಿಯವರ ಗೌರವ ಸ್ಮರಣಾರ್ಥವಾಗಿ ‘ಮಾತೃದಿವಸ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹುನಗುಂದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಹೋರಾಟ, ಸತ್ಯಾಗ್ರಹ, ಅಹಿಂಸಾ ಕಾರ್ಯಕ್ರಮಗಳಿಗೆ ಅಹರ್ನಿಷಿ ಬೆನ್ನೆಲುಬಾಗಿ ನಿಂತ ಅವರ ಪತ್ನಿ ಕಸ್ತೂರಬಾ ಗಾಂಧೀಜಿಯವರಷ್ಟೇ ಪ್ರಮುಖರಾದವರು. ಆದ್ದರಿಂದ ಅವರ ಕುರಿತು ಹೆಚ್ಚೆಚ್ಚು ಅಧ್ಯಯನ ನಡೆಯಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕರು ಮತ್ತು ಸಾಹಿತಿಗಳಾದ ಇಂದುಮತಿ ಪುರಾಣಿಕ ಅವರು ಗಾಂಧೀಜಿಯೆAಬ ಮಾನವತೆಯ ಬೆಳಕು ಬೆಳಗಬೇಕಾದರೆ, ಅವರ ಪತ್ನಿ ಎಣ್ಣೆಯಾಗಿ, ಬತ್ತಿಯಾಗಿ, ಹಣತೆಯಾಗಿ ಸಹಾಯ ಮಾಡಿದರು ಎಂದು ಹೇಳಿದರು. ಸಾಮಾನ್ಯ ಮಹಿಳೆಯಾಗಿ ಸಂಸಾರದ ಸುಖವನ್ನನುಭವಿಸುವ ಬದಲು ಪತಿಯ ಸಿದ್ಧಾಂತ ಹಾಗೂ ವಿಚಾರಧಾರೆಗಳಿಗೆ ಹೆಗಲುಗೊಟ್ಟು ರಾಷ್ಟçಪ್ರೇಮಿಯಾಗಿ ತಾಯ್ನೆಲದ ಸ್ವಾತಂತ್ರö್ಯಕ್ಕಾಗಿ ಸೇವೆ, ಮಾನವೀಯ ಮೌಲ್ಯಗಳನ್ನು ಸಾರುವ ಮಹಾಮಾತೆಯಾಗಿ ತಮ್ಮ ಬದುಕನ್ನು ಗಂಧದ ಕೊರಡಿನಂತೆ ಸವೆಸಿ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಸಂಘಟಕರಾದ ನೇತಾಜಿ ಗಾಂಧಿ ಮಾತನಾಡಿ ಗಾಂಧೀಜಿಯವರ ಜೊತೆ ಅವರ ಪತ್ನಿ ಕಸ್ತೂರಬಾ ಗಾಂಧಿಯವರು ನಡೆಸಿದ ಸಾತ್ವಿಕ ಹೋರಾಟ, ತಪಸ್ಸಿನಂತೆ ಬಾಳು ನಡೆಸಿದ ಮಾರ್ಗ ಅನುಕರಣೀಯವಾದದ್ದು. ಸ್ವಾತಂತ್ರö್ಯಕಾಗಿ ಸೆರೆಮನೆಯಲ್ಲಿಯೆ ಸಮಾಧಿಯಾದ ಮಹಾಮಾತೆಯ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕುಮಾರಿ ಸಹನಾ ಕೊಪ್ಪರದ ಪ್ರಾರ್ಥಿಸಿದರು. ಪ್ರೊ. ಎಸ್.ಎಸ್. ಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯರಾದ ಪ್ರೊ. ಬಿ. ಬಿ. ಸುಗ್ಗಮದ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಎಸ್. ಆರ್. ಕಲ್ಯಾಣಶೆಟ್ಟಿ ನಿರೂಪಿಸಿದರು. ಪ್ರೊ. ಟಿ.ಎಂ. ಕುಲಕರ್ಣಿ ಅತಿಥಿ ಪರಿಚಯ ಮಾಡಿದರು. ಪ್ರೊ. ಎಂ. ಎನ್. ಗೌಡರ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಚೇರಮನ್ನರಾದ ಶ್ರೀ. ಬಿ.ಎಂ. ಕಬ್ಬಿಣದ ಅವರು ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಪಿ.ಆರ್. ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಸಂಪದಾ ಮುಳಗುಂದ ಹಾಗೂ ಭಾರತಿ ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಸಪ್ರಶ್ನೆ:
ಕಸ್ತೂರಬಾ ಮತ್ತು ಗಾಂಧೀಜಿಯವರ ಕುರಿತು ಜರುಗಿದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಗಾಂಧಿ ಪುಸ್ತಕಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಛಾಯಾ ಚಿತ್ರಗಳ ಪ್ರದರ್ಶನ:
ಸ್ವಾತಂತ್ರö್ಯ ಸಂಗ್ರಾಮದ ಸಂದರ್ಭದಲ್ಲಿಯ ಮಹಾತ್ಮಾ ಗಾಂಧೀಜಿ ಮತ್ತು ಕಸ್ತೂರಬಾ ಸೇರಿದಂತೆ ನೇತಾಜಿ, ನೆಹರೂ, ಸರೋಜಿನಿ ನಾಯ್ಡು, ಮೌಲಾನಾ ಅಜಾದ್, ಗಫಾರ ಖಾನ್, ಪಟೇಲ್ ಹೀಗೆ ನೂರಾರು ನಾಯಕರ ಚಿತ್ರಗಳನ್ನು ಒಳಗೊಂಡ ೫೦ ಛಾಯಾ ಚಿತ್ರಗಳನ್ನು ಮಹಾವಿದ್ಯಾಲಯದ ಆವರಣದಲ್ಲಿ ಪ್ರದರ್ಶಿಸಲಾಗಿತ್ತು.

Download