17 Nov 2025

National Education Day Celebration-2025-26 Date:11-11-2025


ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳಲೇಬೇಕು: ಟಿ. ಎಂ. ಕುಲಕರ್ಣಿ.

ಇಲಕಲ್ಲ : ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಅಡಿಯಲ್ಲಿ ದಿನಾಂಕ: ೧೧-೧೧-೨೦೨೫ ರಂದು “ರಾಷ್ಟಿçÃಯ ಶಿಕ್ಷಣ ದಿನ”ವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರೊ. ಟಿ. ಎಂ. ಕುಲಕರ್ಣಿ ಮಾತನಾಡಿ, ಈ ದಿನದಂದು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಭಾರತ ಸ್ವಾತಂತ್ರö್ಯ ಹೋರಾಟಗಾರ, ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಅವರ ಜನ್ಮದಿನವನ್ನು “ರಾಷ್ಟಿçÃಯ ಶಿಕ್ಷಣ ದಿನ”ವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಣ ತಜ್ಞ, ಪತ್ರಕರ್ತ, ಸ್ವಾತಂತ್ರö್ಯ ಹೋರಾಟಗಾರ ಮತ್ತು ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದ ಕಲಾಂ ಅವರು ಭಾರತದ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಪ್ರೊ. ಬಿ. ಬಿ. ಸುಗ್ಗಮದ ಅವರು ಸಾಂದರ್ಭಿಕವಾಗಿ ಮಾತನಾಡಿ, ಭಾರತದ ಪ್ರಪ್ರಥಮ ಮಂತ್ರಿ, ಭಾರತ ರತ್ನ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ, ಶಿಕ್ಷಣ ಸಾರ್ವತ್ರಿಕಗೊಳಿಸುವಲ್ಲಿ ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಪಿ. ಆರ್. ಪಾಟೀಲ, ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ. ಎಂ. ಎನ್. ಗೌಡರ ಹಾಗೂ ಪ್ರೊ. ಶಶಿಕಲಾ ಓದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಪವಿತ್ರಾ ಪ್ರಾರ್ಥಿಸಿದರು. ಪ್ರೊ. ಶ್ರೀನಿವಾಸ ಕತ್ತಿ ಸ್ವಾಗತಿಸಿದರು. ಪ್ರೊ. ಡಿ. ಬಿ. ಮಾಗಿ ನಿರೂಪಿಸಿ, ವಂದಿಸಿದರು.

Download