29 Mar 2025

Special Lecture on topic ‘Special tips for Cracking Competitive Exams’

ಇಲಕಲ್ಲ: ಸ್ಥಳೀಯ ಶ್ರೀ ವಿಜಯ ಮಹಾಂತೇಶ ಕಲೆ & ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲಕಲ್ಲ. ಇಲ್ಲಿ ದಿನಾಂಕ: ೨೬-೦೩-೨೦೨೫ ರಂದು ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೇದಿಸಲು ವಿಶೇಷ ಸಲಹೆಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಶ್ರೀ ದೇವೇಂದ್ರ ಎಸ್. ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ತಂತ್ರಗಳು ಮತ್ತು ಸಿದ್ಧತೆಗಳನ್ನು ಕುರಿತು ವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಪಿ. ಆಋ. ಪಾಟೀಲ, ಪ್ರೊ. ಎ.ಸಿ.ದಟ್ಟಿ, ಪ್ರೊ. ವಿ.ಸಿ. ನೆಲೊಗಲ್ಲ, ಉಪಸ್ಥಿತರಿದ್ದರು. ಪ್ಲೇಸ್‌ಮೆಂಟ ಅಧಿಕಾರಿ ಪ್ರೊ. ಎಸ್.ಆರ್. ಕಲ್ಯಾಣಶೆಟ್ಟಿ ಸ್ವಾಗತಿಸಿದರು. ಪ್ರೊ. ಶ್ರೀನಿವಾಸ ಕತ್ತಿ ವಂದಿಸಿದರು.

Download