24 Jan 2022

ಭಾರತ್ ಸ್ಕೌಟ್ಸ ಮತ್ತು ಗೈಡ್ಸ ರೇಂಜರ್ ಘಟಕದ ಉದ್ಘಾಟನೆ ಮತ್ತು ರಾಷ್ಠ್ರೀಯ ಹೆಣ್ಣು ಮಗುವಿನ ದಿನಾಚರಣೆ.

ರಾಷ್ಠ್ರೀಯತೆ ,ಸಹೋದರತ್ವ ಮತ್ತು ಸಂಸ್ಕøತಿಯನ್ನು ಭಾರತ್ ಸ್ಕೌಟ್ಸ ಮತ್ತು ಗೈಡ್ಸ ಬೆಳೆಸುತ್ತದೆ:- ಚಂದ್ರಶೇಖರ ಸಾವಳಗಿ

ಸ್ಥಳಿಯ ಎಸ್.ವ್ಹಿ.ಎಂ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇಂದು ಆಯ್.ಕ್ಯು.ಎ.ಸಿ, ಮತ್ತು ಎನ್.ಎಸ್.ಎಸ್ ಆಯೋಜನೆಯಲ್ಲಿ ಭಾರತ್ ಸ್ಕೌಟ್ಸ ಮತ್ತು ಗೈಡ್ಸ ರೇಂಜರ್ ಘಟಕದ ಉದ್ಘಾಟನೆ ಮತ್ತು ರಾಷ್ಠ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತ್ ಸ್ಕೌಟ್ಸ ಮತ್ತು ಗೈಡ್ಸನ ಬಾಗಲಕೋಟ ಜಿಲ್ಲಾ ಕಾರ್ಯದರ್ಶೀಗಳಾದ ಶ್ರೀ ಚಂದ್ರಶೇಖರ ಸಾವಳಗಿಯವರು ಮತ್ತು ಬಾಗಲಕೋಟ ಜಿಲ್ಲಾ ಸಂಘಟರಾದ ಕುಮಾರ ಪ್ರಮೋದ ಚೌಗುಳೆಯವರು ಮಾತನಾಡಿ ಸ್ಕೌಟ್ಸ ಮತ್ತು ಗೈಡ್ಸ ಅಂತರಾಷ್ಠ್ರೀಯ ಸಂಘನೆಯಾಗಿದ್ದು ಮಕ್ಕಳಲ್ಲಿ ರಾಷ್ಠ್ರೀಯತೆ, ಸಹೋದರತ್ವ, ಸºಕಾರÀ ಮನೋಭಾವ ಮತ್ತು ಸಂಸ್ಕøತಿಯನ್ನು ಬೆಳೆಸುವದರಲ್ಲಿ ನಿರತರಾಗಿದ್ದು, ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಮತ್ತು ಇದನ್ನು ಸೇರುವದರಿಂದ ಉದ್ಯೋಗಗಳನ್ನು ಪಡೆಯುವಲ್ಲಿಯೂ ಸಹಕಾರಿಯಾಗಿದೆ ಎಂದು ಹೆಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಚೇರಮನ್ನರಾದ ಶ್ರೀ ಶರಣಪ್ಪ ಅಕ್ಕಿಯವರು ಮಾತನಾಡಿ ವಿದ್ಯಾರ್ಥಿನಿಯರು ಭಾರತ್ ಸ್ಕೌಟ್ಸ ಮತ್ತು ಗೈಡ್ಸನÀ ಸದುಪಯೋಗ ಪಡಸಿಕೊಳ್ಳಲು ಹೇಳಿದರು ಕಾರ್ಯಕ್ರಮವನ್ನು ಆಯೋಜಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ ಬಿ.ಬಿ.ಸುಗ್ಗಮದ ಅವರು ಸ್ವಾಗತಿಸಿದರು. ಸ್ಕೌಟ್ಸ ಮತ್ತು ಗೈಡ್ಸನ ಮಹಾವಿದ್ಯಾಲಯದ ರೇಂಜರ್ ಲೀಡರ್ ಆದ ಪ್ರೋ ಶ್ರೀಮತಿ ಎಸ್.ಆರ್.ಕಲ್ಯಾಣಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೋ ಶ್ರೀ ಟಿ.ಎಂ.ಕುಲಕರ್ಣಿ ಅವರು ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ನಕ್ಷತ್ರ ಆಚನೂರ ಅವರು ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ಶೈಲಾ ಮಡಿವಾಳರ ಅವರು ವಂದಿಸಿದರು ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಒಕ್ಕುಟದ ಚೇರಮನ್ನರಾದ ಪ್ರೋ ಎಂ.ಎನ್.ಗೌಡರ ಅವರು ಉಪಸ್ಥಿತರಿದ್ದರು ಮತ್ತು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಗೂ ಸ್ಕೌಟ್ಸ ಗೈಡ್ಸನ ಗೈಡ್ಸಗಳು , , ಎನ್.ಎಸ್.ಎಸ್ ಸ್ವಯಂ ಸೇವಕರು ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply