21 Jun 2023

International Yoga Day 2023

ಸ್ವಸ್ಥ ಮನಸ್ಸು, ಆರೋಗ್ಯಕ್ಕೆ ಯೋಗವೇ ಮದ್ದು- ಚಿದಂಬರ ದೇಶಪಾಂಡೆ.

ಜೂನ್ ೨೧ : ಸ್ಥಳಿಯ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಇಳಕಲ್ಲ ಹಾಗೂ ಎಸ್ ಆರ್ ಕಂಠಿ ಬಾಲಕಿಯರ ಪ್ರೌಢ ಶಾಲೆ ಇಳಕಲ್ಲದ ಸಂಯುಕ್ತ ಆಶ್ರಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದ ಶ್ರೀ ಯೋಗಿಶ್ವರ್ ಯಜ್ಞವಲ್ಕö್ಯ ಯೋಗ ಕೇಂದ್ರದ ಯೋಗ ಮಾರ್ಗದರ್ಶಕರಾದ ಶ್ರೀ ಚಿದಂಬರ ದೇಶಪಾಂಡೆ ಮಾತನಾಡುತ್ತಾ ಯೋಗವು ಅನಾದಿ ಕಾಲದಿಂದಲು ಭಾರತದಲ್ಲಿ ಅಸ್ತಿತ್ವದಲ್ಲಿದ್ದು ಈಗ ವಿಶ್ವದಾದ್ಯಂತ ಪ್ರಚಾರಗೊಂಡು ಪ್ರಸಿಧ್ದಿಹೊಂದಿದ್ದು ಪ್ರತಿಯೊಬ್ಬರು ಜೀವನದ ಅತ್ಯಂತ ಪ್ರಮುಖ ಅಭ್ಯಾಸವನ್ನಾಗಿ ಮಾಡಿಕೊಂಡರೆ ಸ್ವಸ್ಥ ಮನಸ್ಸು ಮತ್ತು ದೇಹವನ್ನು ಹೊಂದಿ ಆರೋಗ್ಯಕರ, ಆನಂದದಾಯಕ ಜೀವನವನ್ನು ನೆಡೆಸಬಹುದೆಂದರು.
ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಚೇರಮನ್ನರಾದ ಶ್ರೀ ಬಿ.ಎಂ.ಕಬ್ಬಿಣದ ಅವರು ಅಧ್ಯಕ್ಷತೆ ವಹಿಸಿದ್ದರು, ಶ್ರೀ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯ ಚೇರಮನ್ನರಾದ ಶ್ರೀ ಪ್ರಶಾಂತ ಪಟ್ಟಣಶೆಟ್ಟಿ ಅವರು ಉಪಸ್ಥಿತಿ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೋ ಬಿ.ಬಿ.ಸುಗ್ಗಮದ ಅವರು, ಶ್ರೀ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಂಗಣ್ಣ ಗದ್ದಿಯವರು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಪ್ರೋ ಎಮ್.ಎನ್.ಗೌಡರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಭಂದಿ ಹಾಗೂ ಶ್ರೀ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಭಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶ್ರೀ ಟಿ.ಎಂ.ಕುಲಕರ್ಣಿ ನಿರೂಪಿಸಿದರು, ಕುಮಾರಿ ಸಹನಾ ಕೊಪ್ಪರದ ಪ್ರಾರ್ಥಿಸಿದರು ಮತ್ತು ಶ್ರೀ ಮಹಿಪತಿ ಕುಲಕರ್ಣಿ ವಂದಿಸಿದರು.  

 

Loader Loading...
EAD Logo Taking too long?
Reload Reload document
| Open Open in new tab

 

Leave a Reply