National Voter’s Day Celebration 2024-25
ಮಹಾವಿದ್ಯಾಲಯದಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ.
೨೫-೦೧-೨೦೨೫
ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲಕಲ್ಲ ಹಾಗೂ ರಾಷ್ಟಿçÃಯ ಸೇವಾ ಯೋಜನೆ ಘಟಕ-೧ ಮತ್ತು ೨ ಇವರ ಸಹಯೋಗದಲ್ಲಿ “ರಾಷ್ಟಿçÃಯ ಮತದಾರರ ದಿನಾಚರಣೆ”ಯನ್ನು ೨೫ ನೇ ಜನೇವರಿ ೨೦೨೫ ರಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಎಂ.ಎನ್. ಗೌಡರ, ಎನ್.ಎಸ್.ಎಸ್ ಅಧಿಕಾರಿಗಳು ವಹಿಸಿಕೊಂಡಿದ್ದರು. ಅತಿಥಿಗಳಾಗಿ ಶ್ರೀ ಪಿ.ಆರ್. ಪಾಟೀಲ, ಶ್ರೀಮತಿ. ಆರ್.ವಿ. ಶ್ಯಾವಿ, ಶ್ರೀಮತಿ. ಎ.ಎಸ್. ಕೂಡ್ಲೆಪ್ಪನವರ ಹಾಗೂ ಶ್ರೀ. ಎಸ್.ಟಿ. ಕತ್ತಿ, ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ. ಎಂ.ಎನ್ ಗೌಡರ ರವರು ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ರಾಜಕೀಯವಾಗಿ ತಮ್ಮ ಪರಮಾಧಿಕಾರವನ್ನು ಮತದಾನದ ಮೂಲಕ ಚಲಾಯಿಸಿ, ತಮಗೆ ಬೇಕಾದ ಸರ್ಕಾರವನ್ನು ರಚಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಭಾರತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಯಾವುದೇ ತಾರತಮ್ಯ ಮಾಡದೇ ಮತದಾನ ಮಾಡಲು ಸಂವಿಧಾನ ಬದ್ಧವಾಗಿ ಅವಕಾಶ ನೀಡಿರುವುದರಿಂದ, ಪ್ರಜೆಗಳು ನಿಷ್ಪಕ್ಷಪಾತವಾಗಿ ಮತ್ತು ನಿರ್ಭೀತಿಯಿಂದ, ಕಡ್ಡಾಯವಾಗಿ ಮತ ಚಲಾವಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಕ್ರೀಯವಾಗಿ ಪಾಲ್ಗೊಂಡು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಪ್ರಾಚಾರ್ಯರಾದ ಶ್ರೀ. ಬಿ. ಬಿ. ಸುಗ್ಗಮದರವರು ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ಟಿ. ಎಂ. ಕುಲಕರ್ಣಿ, ಉಪನ್ಯಾಸಕರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾಥಿಗಳು ಭಾಗವಹಿಸಿದ್ದರು.