National Youth Day Celebration 12-01-2025
ಮಹಾವಿದ್ಯಾಲಯದಲ್ಲಿ ರಾಷ್ಟಿçÃಯ ಯುವ ದಿನ ಆಚರಣೆ.
ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಅಡಿಯಲ್ಲಿ ಮತ್ತು ಎನ್.ಎಸ್.ಎಸ್ ಸಹಯೋಗದೊಂದಿಗೆ ವೀರ ಸನ್ಯಾಸಿ, ಯುವಕರ ಸ್ಪೂರ್ತಿ ಮತ್ತು ಮಹಾನ್ ತತ್ವಜ್ಞಾನಿ ಶ್ರೀ ವಿವೇಕಾನಂದರ ಜನ್ಮದಿನಾಚರಣೆಯನ್ನು ದಿನಾಂಕ: ೧೨-೦೧-೨೦೨೫ ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಶ್ರೀ ಸ್ವಾಮಿ ವಿವೇಕಾನಂದರ ಜೀವನ ಸಾಧನೆಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿದರು. ಶ್ರೀ ಎಂ.ಎನ್. ಗೌಡರ, ಎನ್.ಎಸ್.ಎಸ್ ಅಧಿಕಾರಿಗಳು ಸ್ವಾಗತಿಸಿದರು. ಶ್ರೀ ಟಿ.ಎಂ. ಕುಲಕರ್ಣಿ ನಿರೂಪಿಸಿದರು. ಶ್ರೀ ಜಿ. ಜಿ. ಕವಡಿಮಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರು ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರೇಷ್ಮಾ ಕಂದಗಲ್ಲ, ಶ್ರೀ ಬಿ. ಕೆ. ನಾಗಲೀಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪೂರ್ಣ ಪ್ರಮಾಣದಲ್ಲಿ ಹಾಜರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.