04 Oct 2021

NEP-2020

ಕಾಲೇಜಿನಲ್ಲಿ ಹೊಸ ರಾಷ್ಠ್ರೀಯ ಶಿಕ್ಷಣ ನೀತಿ ಅನುಷ್ಠಾನ-ಶರಣಪ್ಪ ಅಕ್ಕಿ

ಇಲಕಲ್ಲ- ಸ್ಥಳಿಯ ಶ್ರೀ ವಿಜಯ ಮಹಾಂತೇಶ ಮಹಿಳಾ ಪದವಿ ಕಾಲೇಜು ಇಲಕಲ್ಲನಲ್ಲಿ 2021-22ನೇ ಸಾಲಿಗೆ ಹೊಸ ರಾಷ್ಠ್ರೀಯ ಶಿಕ್ಷಣ ನೀತಿ ಸರಕಾರ ಮತ್ತು ವಿಶ್ವವಿದ್ಯಾಲಯದ, ಆದೇಶದ ಅನ್ವಯ ಅನುಷ್ಠಾನ ತರಲಾಗುತ್ತಿದ್ದು. ಸದರಿ ನೀತಿ ಅನ್ವಯ ಮಹಾವಿದ್ಯಾಲಯದಲ್ಲಿ ಬೋಧಕ ಸಿಬ್ಬಂಧಿಯವರಿಗೆ, ಪಾಲಕರಿಗೆ ಮತ್ತು ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಕಾಲೇಜು ಚೇರಮನ್ನರಾದ ಶ್ರೀ ಶರಣಪ್ಪ ಅಕ್ಕಿಯವರು ಮಾತನಾಡಿ ‘ಬದಲಾವಣೆ ಜಗದ ನಿಯಮ’ ಅದರಂತೆ ಬದಲಾದ ಶಿಕ್ಷಣ ನೀತಿಗೆ ಅನುಗುಣವಾಗಿ ಬೋಧಕ ಸಿಬ್ಬಂದಿಯವರು ಕೌಶಲ್ಯಾಭಿವೃಧ್ದಿಯನ್ನು ವಿದ್ಯಾರ್ಥಿಗಳಲ್ಲಿ ಮಾಡಿಸಬೇಕಾಗಿದೆ. ಅದಕ್ಕೆ ಪೂರಕವಾದ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುತ್ತದೆ. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪ್ರೋ, ಶ್ರೀಮತಿ ಎಸ್.ಎಸ್ ಉಪನಾಳ ರವರು ಮಾತನಾಡಿ ಬಿ.ಎ/ಬಿ.ಕಾಂ ಪದವಿ ಪಠ್ಯ 4 ವರ್ಷದ ಅವಧಿಗೆ ರಚನೆಯಾಗಿದ್ದು. ಅನುಷ್ಠಾನ ಮಾರ್ಗೋಪಾಯ ಮತ್ತು ಅದರ ಅವಶ್ಯಕತೆ ಕುರಿತು ತಿಳಿಸಿದರು.

ಪ್ರಾಚಾರ್ಯರಾದ ಬಸವರಾಜ ಸುಗ್ಗಮದ ಅವರು ರಾಷ್ಠ್ರೀಯ ಶಿಕ್ಷಣ ನೀತಿ 2020ರ ಕುರಿತು ಸಮಗ್ರವಾಗಿ ವಿವರಿಸಿದರು. ಸಂವಾದದಲ್ಲಿ ಪಾಲ್ಗೊಂಡ ಪಾಲಕರಿಗೆ ವಿದ್ಯಾರ್ಥಿಗಳಿಗೆ ಹೊಸ ರಾಷ್ಠ್ರೀಯ ಶಿಕ್ಷಣ ನೀತಿ ಕುರಿತು ತಿಳಿಸಿದರು. ಪ್ರೋ, ಶ್ರೀಮತಿ ಆರ್.ಬಿ. ಬಾಡ ಉಪಸ್ಥಿತರಿದ್ದರು. ಹಾಗೂ ಹೊಸ ಶಿಕ್ಷಣ ನೀತಿಯ ಸಹಾಯವಾಣಿ ಸಂಚಾಲಕರಾದ ಪ್ರೋ, ಶ್ರೀ ಜಿ. ಜಿ. ಪಾಟೀಲ ಸ್ವಾಗತಿಸಿದರು. ಪ್ರೋ, ಶ್ರೀಮತಿ ಎಸ್. ಆರ್. ಕಲ್ಯಾಣಶೆಟ್ಟಿ ರವರು ವಂದಿಸಿದರು ಪ್ರೋ, ಶ್ರೀ ಟಿ.ಎಂ. ಕುಲಕರ್ಣಿಯವರು ಕಾರ್ಯಕ್ರಮ ನಿರೂಪಿಸಿದರು.

Leave a Reply