30 Nov 2024

Participation & Award win in Youth Festival @ Vijayapura.


ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ, ಇಳಕಲ್ಲ

ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕು. ಸುಧಾ ಪಾಟೀಲ, ಕು. ಸೌಮ್ಯ ಬಸಾಪೂರ ಕು. ದೀಪಾ ಟಕ್ಕಳಕಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಶಕ್ತಿ ಸಂಭ್ರಮ ೧೯ ವಿಜಯಪುರದಲ್ಲಿ ಜರುಗಿದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕು. ನೀಲಮ್ಮ ಕಾಳಗಿ ಕಾರ್ಟೂನ್ (ವ್ಯಂಗ್ಯಚಿತ್ರ) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಸಂಘದ ಚೇರಮನ್ನರಾದ ಎಸ್.ಎಂ. ಗೊಂಗಡಶೆಟ್ಟಿ, ವ್ಹಾ. ಚೇರಮನ್ನರಾದ ಅರುಣ ಎ ಬಿಜ್ಜಲ, ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ ದೇವಗಿರಿಕರ, ಕಾಲೇಜು ಚೇರಮನ್ನರಾದ ಬಸವರಾಜ ಕಬ್ಬಿಣದ, ಪ್ರಾಚಾರ್ಯರಾದ ಬಸವರಾಜ ಸುಗ್ಗಮದ, ಪಠ್ಯೇತರ ಚಟುವಟಿಕೆ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀ ಎಮ್. ಎನ್. ಗೌಡರ ಹಾಗೂ ಶ್ರೀಮತಿ ಆರ್. ಎನ್. ಕಂದಗಲ್ಲ ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Leave a Reply