25 Feb 2022

Presentation of Drama

ರಂಗ ಕಲೆ ನಿರ್ಜಿವ ವಸ್ತುಗಳಿಗೆ ಜೀವ ತುಂಬುತ್ತದೆ : ಆರ್.ಎಂ.ಪಾಟೀಲ

ಇಳಕಲ್- ಸ್ಥಳಿಯ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತಾಧಿಕಾರಿ ಆರ್ ಎಂ ಪಾಟೀಲ ಉದ್ಘಾಟಿಸಿದರು.
ಉದ್ಘಾಟನಪರ ಮಾತುಗಳಲ್ಲಿ ರಂಗಕಲೆ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಣ್ಮರೆಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ‘ತೋಟ್ಟಿಲುಗಳೆμÉ್ಟೂ, ಮಸಣಗಳೆμÉ್ಟೂ’ ಎಂಬ ನಾಟಕ ಪ್ರದರ್ಶನ ಮಾಡಿ ನಿರ್ಜಿವ ವಸ್ತುಗಳಿಗೆ ಜೀವ ತುಂಬಿದ್ದಾರೆ ಪ್ರಸ್ತುತ ಸಮಾಜದ ಸ್ಥಿತಿ ತಿಳಿಸಿದ್ದಾರೆ ಎಂದು ಹೇಳಿದರು.
ಶಶಿಧರ ಬಾರಿಘಾಟ ಬೆಂಗಳೂರು ರವರು ಬರೆದ ನಾಟಕವನ್ನು ಸ್ಥಳೀಯ ರಂಗ ಕರ್ಮಿ ಹಾಗೂ ಚಲನಚಿತ್ರ ನಟ ಮಹಾಂತೇಶ ಗಜೇಂದ್ರಗಡ ನಾಟಕ ನಿರ್ದೇಶಿಸಿದರು. ಕಾಲೇಜು ಚೇರಮನ್ ಶರಣಪ್ಪ ಅಕ್ಕಿಯವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಪ್ರಾಚಾರ್ಯ ಬಸವರಾಜ ಸುಗ್ಗಮದ. ಉಪನ್ಯಾಸಕಿ ಸುವರ್ಣ ಆರ್ ಕಲ್ಯಾಣಶೆಟ್ಟಿ. ನಗರದ ಸಾಹಿತಿಗಳಾದ ಗುರುದಾಸ್ ನಾಗಲೋಟಿ, ಮಹಾದೇವ ಕಂಬಾಗಿ, ಸ್ನೇಹ ರಂಗದ ಅಧ್ಯಕ್ಷ ಬಸವರಾಜ ಮಠದ, ಸುನಂದಾ ಕಂದಗಲ್, ಸಂಗಣ್ಣ ಗದ್ದಿ. ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತಿಯಿದ್ದು. ಟಿ.ಎಂ.ಕುಲಕರ್ಣಿ ಕಾರ್ಯಕ್ರಮ ನಿರುಪಿಸಿದರು.

Leave a Reply