World Cancer Day Awareness Program
ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ
ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ, ಎನ್.ಎಸ್.ಎಸ್, ರೆಡ್ ರಿಬ್ಬನ್ ಮತ್ತು ರೆಡ್ ಕ್ರಾಸ್ ಅಡಿಯಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆಯ ಅಂಗವಾಗಿ ನಗರದ ಪ್ರಸಿದ್ಧ ಸ್ರೀರೋಗ ತಜ್ಞ ವೈದ್ಯರಾದ ಡಾ|| ಶೋಭಾ.ವಿ.ಶ್ಯಾವಿ ಅವರು ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳು ಕ್ಯಾನ್ಸರ್ ರೋಗ ತಡೆಗಟ್ಟುವಲ್ಲಿ ವಹಿಸಬಹುದಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು ವಿವಿಧ ರೀತಿಯ ಕ್ಯಾನ್ಸರಗಳಾದ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರಕ್ತ ಕ್ಯಾನ್ಸರ್ ಇತ್ಯಾದಿ ಕ್ಯಾನ್ಸರಗಳ ಕುರಿತು ಮಾಹಿತಿ ನೀಡಿ ಕ್ಯಾನ್ಸರ್ ಬರದ ಹಾಗೆ ದಿನನಿತ್ಯವು ವ್ಯಾಯಾಮ, ಆಹಾರ ಪದ್ಧತಿ, ಹೆಚ್ಚು ನೀರು ಸೇವನೆ, ದುಷ್ಚಟಗಳಿಂದ ದೂರವಿರುವುದರಿಂದ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ಮಾಡಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯರಾದ ಬಿ.ಬಿ.ಸುಗ್ಗಮದ, ಎನ್.ಎಸ್.ಎಸ್ ಅಧಿಕಾರಿಗಳಾದ ಎಮ್.ಎನ್.ಗೌಡರ, ಡಾ|| ರಾಧಿಕಾ.ಎಮ್, ಐಕ್ಯುಎಸಿ ಸಂಚಾಲಕರಾದ ಡಾ|| ಆರ್.ಬಿ.ಬಾಡ ಹಾಗೂ ಪ್ರೋ ಎಸ್.ಎಸ್.ಉಪನಾಳ, ಶ್ರೀಮತಿ ಆರ್.ವ್ಹಿ,ಶ್ಯಾವಿ, ಉಪಸ್ಥಿತರಿದ್ದರು. ಪ್ರೋ ಟಿ.ಎಮ್.ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರೋ ಬಿ.ಬಿ.ಸುಗ್ಗಮದ ಸ್ವಾಗತಿಸಿದರು ಹಾಗೂ ಪ್ರೋ ಎಮ್.ಎನ್.ಗೌಡರ ವಂದಿಸಿದರು.