ರಾಷ್ಟ್ರೀಯ ಮತದಾನ ದಿನಾಚರಣೆ ‘ಮತದಾನ ಪ್ರಜಾಪ್ರಭುತ್ವದ ಪ್ರಮುಖ ಭಾಗ’- ಬಸವರಾಜ ಸಜ್ಜನ
ರಾಷ್ಟ್ರೀಯ ಮತದಾನ ದಿನಾಚರಣೆ
ಮತದಾನ ಪ್ರಜಾಪ್ರಭುತ್ವದ ಪ್ರಮುಖ ಭಾಗ- ಬಸವರಾಜ ಸಜ್ಜನ
ಇಳಕಲ್ಲ- ಸ್ಥಳಿಯ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ ಟ್ರಾಫಿಕ್ ಇನ್ಸ್ಪೆಕ್ಟರ್ ಮಾತನಾಡುತ್ತಾ ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಈ ಕುರಿತು ಚುನಾವಣೆಯಲ್ಲಿ 100% ರಷ್ಟು ಮತದಾನವಾಗಬೇಕು. ಮತದಾನಕ್ಕೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು ಜಾತಿ-ಮತ, ಪಂಥ, ಹಣ ಇತ್ಯಾದಿಗಳಿಂದ ದೂರವಿದ್ದು ಚುನಾವಣೆಯಲ್ಲಿ ಸಾಮಾಜಿಕ ಸೇವೆಯಲ್ಲಿ ಕಳಕಳಿ ಇರುವವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಕಾಲೇಜು ಚೇರಮನ್ನರಾದ ಶ್ರೀ ಶರಣಪ್ಪ.ಸಿ.ಅಕ್ಕಿ ಅವರು ಮತದಾನ ದಿನಾಚರಣೆಯ ‘ಪ್ರತಿಜ್ಞಾವಿಧಿ ಬೋಧನೆ ನೀಡಿ ಮಾತನಾಡುತ್ತಾ ಮತದಾನ ಕುರಿತು ಸಾಕಷ್ಟು ಪ್ರಚಾರ ಜಾಗ್ರತಿ ಮೂಡಿಸಬೇಕು ಎಂದು ಹೇಳಿದರು . ಪ್ರಾಚಾರ್ಯರಾದ ಪ್ರೋ ಶ್ರೀ ಬಿ.ಬಿ.ಸುಗ್ಗಮದ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಪ್ರೋ ಶ್ರೀ ಎಂ.ಎನ್.ಗೌಡರ, ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೋ ಶ್ರೀ ಟಿ.ಎಂ.ಕುಲಕರ್ಣಿ,ಪ್ರೋ ಶ್ರೀಮತಿ ಕೆ.ಡಿ.ಬಿರಾದರ, ಹಾಗೂ ಭಾರತ್ ಸ್ಕೌಟ್ಸ ಮತ್ತು ಗೈಡ್ಸ ರೇಂಜರ್ ಲೀಡರ್ ಆದ ಪ್ರೋ ಶ್ರೀಮತಿ ಎಸ್.ಆರ್.ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು. ಕುಮಾರಿ ಅಕ್ಷತಾ ಸ್ವಾಗತಿಸಿದರು, ಕುಮಾರಿ ಅಪರ್ಣ ಜಿಗಳೂರ ವಂದಿಸಿದರು. ಅನಿತಾ ಗುಡಾರ ಕಾರ್ಯಕ್ರಮ ನಿರೂಪಿಸಿದರು.