30 Nov 2024

Constitution Day Celebration 2024-25

ಸಂವಿಧಾನ ದಿನ ಆಚರಣೆ:
ನವೆಂಬರ್ ೨೬ ೨೦೨೪ ಮಂಗಳವಾರದAದು ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್, ಐ.ಕ್ಯೂ,ಎ.ಸಿ ಹಾಗೂ ರಾಜ್ಯಶಾಸ್ತç ವಿಭಾಗದ ವತಿಯಿಂದ ಭಾರತದ ಸಂವಿಧಾನದ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಪ್ರಾಚಾರ್ಯರಾದ, ಶ್ರೀ ಬಿ.ಬಿ. ಸುಗ್ಗಮದ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಎನ್.ಎಸ್.ಎಸ್. ಘಟಕದ ಕಾರ್ಯಾಧ್ಯಕ್ಷರಾದ ಶ್ರೀ. ಎಮ್.ಎನ್.ಗೌಡರ ಅವರು ಪಾಲ್ಗೊಂಡಿದ್ದರು. ಅತಿಥಿಗಳಾಗಿ ಐ.ಕ್ಯೂ,ಎ.ಸಿ ಸಂಯೋಜಕರಾದ ಶ್ರೀ. ಪಿ. ಆರ್. ಪಾಟೀಲ ಹಾಗೂ ರಾಜ್ಯಶಾಸ್ತçದ ಉಪನ್ಯಾಸಕರಾದ ಶ್ರೀ. ಎಸ್.ಟಿ. ಕಟ್ಟಿ ಅವರು ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾದ ಶ್ರೀ ಎಮ್.ಎನ್ ಗೌಡರ (ಎನ್.ಎಸ್.ಎಸ್.)ರವರು ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಬೃಹದಾಕಾರವುಳ್ಳ ಆದರ್ಶ ಸಂವಿಧಾನವಾಗಿ ಜಗತ್ತಿಗೆ ಮಾದರಿ ಸಂವಿಧಾನವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಭಾರತದ ಸಂವಿಧಾನವು ಸ್ವಾತಂತ್ರ ಚಳುವಳಿಯ ಹೋರಾಟದ ಹಾದಿಯಲ್ಲಿಯೇ ಬೆಳವಣಿಗೆಯನ್ನು ಹೊಂದಿರುವ ಮೂಲಭೂತ ಕಾನೂನು ಆಗಿದ್ದು, ಇದನ್ನು ರಚಿಸಲು ಸುಮಾರು ೬೦ ದೇಶಗಳ ಸಂವಿಧಾನದ ಮೂಲಾಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಭಾರತದ ಸನ್ನಿವೇಶಕ್ಕೆ ತಕ್ಕಂತೆ ಅಳವಡಿಸಿಕೊಳ್ಳಲು ನಮ್ಮ ದೇಶದ ಸಂವಿಧಾನದ ರಚನಾಕಾರರು ಪ್ರಯತ್ನಿಸಿರುತ್ತಾರೆ. ಅದರಂತೆ ನಮ್ಮ ದೇಶದ ಸಂವಿಧಾನ ರಚಿಸಲು ೨ ವರ್ಷ ೧೧ ತಿಂಗಳು ೧೮ ದಿವಸಗಳ ಕಾಲ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿರುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅದರಂತೆ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆಯ ಮೂಲಾಂಶಗಳ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ಎಸ್.ಟಿ. ಕಟ್ಟಿ, ರಾಜ್ಯಶಾಸ್ತçದ ಉಪನ್ಯಾಸಕರು ನೆರವೇರಿಸಿರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಐ.ಕ್ಯೂ,ಎ.ಸಿ ಸಂಯೋಜಕರಾದ ಶ್ರೀ ಪಿ.ಆರ್.ಪಾಟೀಲ ಸಂಖ್ಯಾಶಾಸ್ತçದ ಪ್ರಾಧ್ಯಾಪಕರು ನೆರವೇರಿಸಿದರು.

Leave a Reply