Union opening function 2024-25
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಧನಾತ್ಮಕ ಚಿಂತನೆ ಅವಶ್ಯಕ: ಪ್ರೊ. ಮಹಾಂತಪ್ಪ ಕೊಡಗಲಿ.
ಇಲಕಲ್ಲ: ಸ್ಥಳೀಯ ವಿಜಯ ಮಹಾಂತೇಶ ಮಹಿಳಾ ಮಹಾವಿದ್ಯಾಲಯದಲ್ಲಿ ೨೦೨೪-೨೫ ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿದ ಪ್ರೊ. ಮಹಾಂತಪ್ಪ ಕೊಡಗಲಿ,ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಸಿಂಧನೂರು. ಇವರು ವಿದ್ಯಾರ್ಥಿಗಳ ಲಕ್ಷಣಗಳನ್ನು ಕುರಿತು ಹೇಳಿದರು. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ’. ನಾವು ಸಮಯದ ಜೊತೆ ನಡೆಯಬೇಕು. ಪುಸ್ತಕಗಳು ನಮ್ಮ ಸ್ನೇಹಿತರಾಗಬೇಕು ಎಂಬ ಉತ್ತಮ ಸಂದೇಶಗಳನ್ನು ಹೇಳಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ರಾಮ್‌ಭೂಪಾಲ್ ಚೌಧರಿ, ಉಪನ್ಯಾಸಕರು, ಗುರು ಚೈತನ್ಯ ಪಿ.ಯು ಕಾಲೇಜ್, ಇಲಕಲ್ಲ. ಆಗಮಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು. ಕೆಟ್ಟ ಯೋಚನೆಗಳನ್ನು ಮಾಡಬಾರದು. ಜೀವನದ ಪ್ರತಿ ಸಂದರ್ಭವನ್ನು ನಿಭಾಯಿಸಿಕೊಳ್ಳುವುದನ್ನು ಕಲಿಯಬೇಕು. ಮನಸ್ಸನ್ನು ನಾವು ಹೇಳಿದಂತೆ ಕೇಳುವ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಚೇರಮನ್ನರಾದ ಶ್ರೀ ಬಿ.ಎಂ. ಕಬ್ಬಿಣದ ಅವರು ಅಧ್ಯಕ್ಷತೆ ವಹಿಸಿದ್ದರು. ಹಾಗೂ ಪ್ರಾಚಾರ್ಯರಾದ ಪ್ರೊ. ಬಿ. ಬಿ. ಸುಗ್ಗಮದ ಅವರು ಸ್ವಾಗತ ಮತ್ತು ಪುಷ್ಪಾರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಾಗೂ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಪ್ರೊ. ಟಿ. ಎಂ. ಕುಲಕರ್ಣಿಯವರು ಮುಖ್ಯ ಅತಿಥಿ ಮತ್ತು ಉದ್ಘಾಟಕರ ಪರಿಚಯವನ್ನು ಮಾಡಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಪಿ. ಆರ್. ಪಾಟೀಲ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಗಂಗಮ್ಮ ಉಪ್ಪಾರ ಹಾಗೂ ಕು. ಸ್ನೇಹಬಿಂದು ಚಿಲಕದ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಉಪನ್ಯಾಸಕರಾದ ಶ್ರೀಮತಿ ಪಿ. ವಿ. ಅಂಗಡಿಯವರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಕು. ದೇವಿ ಬಡಿಗೇರ ಮತ್ತು ಗಂಗಾ ಬಡಿಗೇರ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ವಚನ ಪ್ರಾರ್ಥನೆಯನ್ನು ಕು. ಭೀಮಮ್ಮ ಹಾಗೂ ಸಂಗಡಿಗರು ನಾಡಗೀತೆಯನ್ನು ಕು. ರಕ್ಷಿತಾ ಕುಲಕರ್ಣಿ ಹಾಗೂ ಸಂಗಡಿಗರು ನಡೆಸಿಕೊಟ್ಟರು.