13 Nov 2024

University Blue Students

ವಿದ್ಯಾ ಹಾಗೂ ಮಹಿಳಾ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆ.

ವಿದ್ಯಾ ಹೊಸೂರ. ಪ್ರತಿಭಾ ಹಿರೆಹಾಳ.

ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕು. ವಿದ್ಯಾ ಹೊಸೂರ ಹಾಗೂ ಕು. ಪ್ರತಿಭಾ ಹಿರೆಹಾಳರವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶೆಟಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಸದರಿ ವಿದ್ಯಾರ್ಥಿನಿಯರು ಸೌತ್ ಝೋನ್ ಇಂಟರ್ ಯುನಿವರ್ಸಿಟಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಸಂಘದ ಚೇರಮನ್ನರಾದ ಎಸ್.ಎಂ. ಗೊಂಗಡಶೆಟ್ಟಿ, ವ್ಹಾ. ಚೇರಮನ್ನರಾದ ಅರುಣ ಎ ಬಿಜ್ಜಲ, ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ ದೇವಗಿರಿಕರ, ಕಾಲೇಜು ಚೇರಮನ್ನರಾದ ಬಸವರಾಜ ಕಬ್ಬಿಣದ, ಪ್ರಾಚಾರ್ಯರಾದ ಬಸವರಾಜ ಸುಗ್ಗಮದ, ಕ್ರೀಡಾ ನಿರ್ದೇಶಕರಾದ ಗಂಗಾಧರ, ಜಿ. ಕವಡಿಮಟ್ಟಿ ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Leave a Reply